ಬೆಂಗಳೂರು: ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ನೀಡಿದ್ದು ಮಗಳ ಹೆಸರಿನಲ್ಲಿ ಕೋಟಿಗಟ್ಟಲೇ ವ್ಯವಹಾರ ಮಾಡಿದ್ರಾ ಎಂಬ ಅನುಮಾನ ಮೂಡಿದೆ. ಇದರೊಂದಿಗೆ ಕೆಫೆ ಕಾಫಿ ಡೇಗೂ ಐಶ್ವರ್ಯ ಖಾತೆಯಿಂದ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.
ಡಿಕೆ ಶಿವಕುಮಾರ್ ವಿಚಾರಣೆ ವೇಳೆ ಅಕ್ರಮ ಹಣ ವರ್ಗಾವಣೆಯಾದ ಖಾತೆಗಳ ಮಾಹಿತಿ ಪಡೆದುಕೊಳ್ಳುವಾಗ ಮಗಳ ಹೆಸರಲ್ಲೂ ಹಣ ವರ್ಗಾವಣೆ ಮಾಡಿರೋದು ತಿಳಿದು ಬಂದಿದೆ, ಈ ಕುರಿತು ಸೆ.೧೨ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ನಲ್ಲಿ ತಿಳಿಸಲಾಗಿದೆ. ೨೪ ವರ್ಷದ ಐಶ್ವರ್ಯ ೭೮ ಕೋಟಿ ಆಸ್ತಿ ಹೊಂದಿದ್ದು ೧೯ ಕಂಪನಿಗಳ ಒಡತಿ ಎಂಬುದು ಇನ್ನೊಂದು ವಿಶೇಷ.