ಆರೋಗ್ಯ
ಅಂಡರ್ವೇರ್ನಲ್ಲಿ ಬ್ಯಾಕ್ಟೀರಿಯಾ
ಅಂಡರ್ವೇರ್ನಲ್ಲಿ ಬ್ಯಾಕ್ಟೀರಿಯಾ..!? : 60 ಡಿಗ್ರಿ ಸೆಲ್ಸಿಯಸ್ನಲ್ಲಿ ವಾಷ್ ಮಾಡಬೇಕಾ..?
ಲಂಡನ್ : ಇದು ಒಂದ್ ರೀತಿ ಮುಜಗರದ ವಿಷಯ. ಆದ್ರೂ, ಎಲ್ಲರಿಗೂ ಅನ್ವಯ ಆಗುವಂತೆ ಪ್ರಾಮುಖ್ಯವಾದದ್ದು. ನಾವು ಧರಿಸುವ ಒಳ ಉಡುಪಿನಲ್ಲಿ ಶೌಚಾಲಯದಲ್ಲಿ ಇರುವಷ್ಟು ಬ್ಯಾಕ್ಟೀರಿಯಾಗಳು ಇರುತ್ವಂತೆ. ಶಾಕಿಂಗ್ ಆದ್ರೂ ಇದು ಸತ್ಯ. ಅದ್ರಲ್ಲೂ ಅಂಡರ್ವೇರ್ನಲ್ಲಿ ಶೌಚಾಲಯದಲ್ಲಿ ಇರುವ ಬ್ಯಾಕ್ಟೀರಿಯಾಗಳೇ ಜೀವಂತವಾಗಿ ಇರುತ್ವೆ ಅಂತ ಲಂಡನ್ ವೈದ್ಯರು ಹೇಳಿದ್ದಾರೆ.
ಎಷ್ಟರ ಮಟ್ಟಿಗೆ ಅಂದ್ರೆ, ನಾವು ಧರಿಸುವ ಅಂಡರ್ವೇರ್ಅನ್ನ ಪ್ರತಿದಿನ ಬದಲಾಯಿಸಬೇಕು. ಇಲ್ಲದೇ ಇದ್ರೆ, ಬ್ಯಾಕ್ಟೀರಿಯಾದಿಂದ ರೋಗಗಳು ಬರೋದು ಗ್ಯಾರೆಂಟಿ. ಅದ್ರಲ್ಲೂ ನಾವ್ ಅಂಡರ್ವೇರ್ಗಳನ್ನ 40 ಡಿಗ್ರಿ ಸೆಲ್ಸಿಯಸ್ ಬಿಸಿ ನೀರಿನಲ್ಲಿ ವಾಷ್ ಮಾಡಿದ್ರೂ, ಬ್ಯಾಕ್ಟೀರಿಯಾಗಳು ಸಾಯುವುದಿಲ್ಲ ಎಂದು ವೈದ್ಯರು ಮತ್ತು ಸಂಶೋಧಕರು ಹೇಳಿದ್ದಾರೆ. ಅಂಡರ್ವೇರ್ನಲ್ಲಿರುವ ಬ್ಯಾಕ್ಟೀರಿಯಾಗಳು ಹೋಗಬೇಕು ಅಂದ್ರೆ, ಕನಿಷ್ಠ 60 ಡಿಗ್ರಿ ಸೆಲ್ಸಿಯಸ್ ಬಿಸಿನೀರಿನಲ್ಲಿ ವಾಶ್ ಮಾಡಬೇಕಂತೆ.
ಇಷ್ಟೇ ಅಲ್ಲದೆ, ಅಂಡರ್ವೇರ್ಅನ್ನ ಇತರೆ ಬಟ್ಟೆ ಜೊತೆ ನೆನೆಸಿಡುವುದು. ಬೇರೆ ಬಟ್ಟೆಗಳ ಜೊತೆ ಸೇರಿಸಿ ವಾಶ್ ಮಾಡುವುದನ್ನ ಮಾಡಬಾರದು ಅಂತ ವೈದ್ಯರು ಹೇಳಿದ್ದಾರೆ.. ವಿಶೇಷವಾಗಿ, ಅಡುಗೆ ಮನೆಯಲ್ಲಿ ಬಳಸುವ ಬಟ್ಟೆಗಳ ಜೊತೆ ಅಂಡರ್ವೇರ್ ವಾಶ್ ಮಾಡಲೇಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಅಂಡರ್ವೇರ್ ಅಥವಾ ನಿಕ್ಕರ್ಗಳನ್ನ ಟೀ ಟವಲ್ ಸೇರಿದಂತೆ ಅಡುಗೆ ಮನೆಯಲ್ಲಿ ಬಳಸುವ ಬಟ್ಟೆಗಳ ಜೊತೆ ಯಾವುದೇ ಕಾರಣಕ್ಕೂ ನೆನೆಸಿಡಬೇಡಿ. ಇನ್ಮುಂದೆ ಅಂಡರ್ವೇರ್ಗಳನ್ನ ಬಿಸಿ ನೀರಿನಲ್ಲಿ ತೊಳೆದರೆ ಉತ್ತಮ. ಇದರಿಂದ ಆರೋಗ್ಯವನ್ನೂ ಕಾಪಾಡಬಹುದು. ಪರಿಸರವನ್ನೂ ಕಾಪಾಡಬಹುದು ಎನ್ನುತ್ತಾರೆ ಸಂಶೋಧಕರು.
ಸೋ, ಇನ್ಮುಂದೆ ಒಳ ಉಡುಪು ಅದರಲ್ಲೂ ಅಂಡರ್ವೇರ್ ವಿಚಾರದಲ್ಲಿ ಬೀ ಕೇರ್ಫುಲ್..