Connect with us

Featured

ಬಿಎಸ್‌ವೈ ಸಿಎಂ ಆದರೆ ನೆರೆಹಾವಳಿ ಅಷ್ಟೇ ಅಲ್ಲ, ಮುಳುಗಡೆಯೂ ಹೌದು..! ಶರಾವತಿ ಮುಳುಗಡೆ ಸಂತ್ರಸ್ಥರ ಅಳಲು

ಶಿವಮೊಗ್ಗ/ ಸಾಗರ :: ಬಿಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ತೆಗೆದುಕೊಂಡಿದ್ದೇ ತಡ ಆಶ್ಲೇಷ ಮಳೆಯ ಅಬ್ಬರ ಜನರ ಜೀವನವನ್ನ ಮುದ್ದೆಯನ್ನಾಗಿಸಿತು. ಬಿಎಸ್‌ ವೈ ಸಿಎಂ ಆದಾಗಲೆಲ್ಲಾ ನೆರೆಹಾವಳಿ ಹೀಗಂತ ಮಾಧ್ಯಮಗಳು ಹೇಳ್ತಿಲ್ಲ, ಬಿಜೆಪಿ ಕಾರ್ಯಕರ್ತರೇ ಗುಸುಗುಸು ಎನ್ನುತ್ತಿದ್ದರು. ಪ್ರವಾಹವೊಂದೇ ಆದರೆ ಪರವಾಗಿಲ್ಲ ಮುಳುಗಡೇ ಭಾಗ್ಯವೂ ಬಂದಿದೆ ಎನ್ನುತ್ತಾರೆ ಸಾಗರ ತಾಲೂಕಿನ ಬರೂರು ಗ್ರಾಮಪಂಚಾಯಿತಿ ಜನರು.

ಸಂತ್ರಸ್ಥರೇ ಪುನಃ ಸಂತ್ರಸ್ಥರು

ಸಾಗರ ತಾಲೂಕಿನಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾದಾಗ ಗುಳೇ ಬಂದ ಸಾವಿರಾರು ಜನರು ಪುನಃ ಕಾಡು ಮೇಡುಗಳಲ್ಲಿ ಚದುರಿ ಮನೆ ಹೊಲ ನಿರ್ಮಿಸಿಕೊಂಡಿದ್ದರು, ಸ್ವಭಾವತಃ ಅವರೆಲ್ಲಾ ಕಾಡಿನ ಒಡನಾಡಿಗಳಾದ್ದರಿಂದ ಆಯಕಟ್ಟು ಪ್ರದೇಶದಲ್ಲಿ ನೆಲೆ ಕಂಡುಕೊಂಡು ಐದಾರು ದಶಕಗಳೇ ಆಗಿವೆ. ಅಂತಹದೊಂದು ಗ್ರಾಮದ ಸರಹದ್ದು ಕುಂದೂರು. ಇಲ್ಲೊಂದು ಕಲ್ಲೊಡ್ಡು ಎಂಬ ಹಳ್ಳ ಇದೆ, ಇದಕ್ಕೆ ಮಳೆಗಾಲದಲ್ಲಿ ಕಾಡಿನ ನೀರೆಲ್ಲಾ ಸೇರಿಕೊಂಡು ತೊರೆಯ ತರಹ ಹರಿಯುತ್ತೆ, ಇದನ್ನೇ ಹಿಡಿದು ನಿಲ್ಲಿಸಿದರೆ ಹೇಗೆ ಎಂಬ ಲೆಕ್ಕಾಚಾರವೊಂದು ಬಹಳ ಹಿಂದೆಯೇ ಮೊಳಕೆಯೊಡೆದು ಈಗ ಹೆಮ್ಮರವಾಗಿದೆ. ಹಳ್ಳದ ಸುತ್ತ ಮನೆ ಜಮೀನು ಮಾಡಿಕೊಂಡ ಎಂಟುನೂರು ಕುಟುಂಬಗಳು ಒಕ್ಕಲೆಬ್ಬಿಸುವ ಭೀತಿಯಿಂದ ದಿನದೂಡುತ್ತಿವೆ.

ಸಾಗರ ಮುಳುಗಿಸಿ ಶಿಕಾರಿಪುರಕ್ಕೆ ನೀರು

ಕಾಗೋಡು ತಿಮ್ಮಪ್ಪನಂತ ಹಿರಿಯ ರಾಜಕಾರಣಿಯೂ ಬಿಎಸ್‌ ಯಡಿಯೂರಪ್ಪನವರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುವ ಹಂತಕ್ಕೆ ಬಿಎಸ್‌ ಯಡಿಯೂರಪ್ಪನವರು ತಂದಿದ್ದಾರೆ ಎನ್ನುವುದಕ್ಕೆ ಸೋಮವಾರ ಸಾಗರದಲ್ಲಿ ನಡೆದ ಬೃಹತ್‌ ಪ್ರತಿಭಟನೆಯೇ ಸಾಕ್ಷಿಯಾಯ್ತು. ಯೋಜಿತ ಕಲ್ಲೊಡ್ಡು ಹಳ್ಳಕ್ಕೆ ಡ್ಯಾಂ ನಿರ್ಮಿಸಿ ಶಿಕಾರಿಪುರ ತಾಲೂಕಿನ ಜಮೀನುಗಳನ್ನ ನೀರಾವರಿ ಮಾಡಿ, ಕುಡಿಯುವ ನೀರನ್ನೂ ಪೂರೈಸಲು ಬಿಎಸ್‌ ಯಡಿಯೂರಪ್ಪ ೧೨೧ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಸರ್ವೇ ಕಾರ್ಯವೂ ಮುಗಿದು ಶಂಕುಸ್ಥಾಪನೆ ಮಾತ್ರ ಬಾಕಿ ಇದೆ. ಈ ಭಾಗದಲ್ಲಿರುವ ಜನರು ಅಂದು ಶರಾವತಿಯಿಂದ ಅನ್ಯಾಯಕ್ಕೊಳಗಾಗಿದ್ದವರು. ಈಗ ಇಲ್ಲಿಯೂ ಖಾತೆಯಲ್ಲದ ಕಾಡು ಮೇಡಲ್ಲಿ ಜೀವನ ನಡೆಸಿದ್ದವರನ್ನ ನಡುನೀರಲ್ಲಿ ಮುಳುಗಿಸುವ ಯೋಜನೆಗೆ ಬಿಎಸ್‌ ವೈ ಕೈ ಹಾಕಿದ್ದಾರೆ. ಮೊದಲ ಹಂತದ ಪ್ರತಿಭಟನೆ ಯಶಸ್ವಿಯಾಗಿದ್ದು ಮುಂದೇನಾಗತ್ತೆ ನೋಡಬೇಕು.

Advertisement

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ