ಬೆಂಗಳೂರು : ದರ್ಶನ್ ತೂಗುದೀಪ್ ಅಭಿನಯದ ಮಹತ್ವಾಕಾಂಕ್ಷೆಯ ಚಿತ್ರ ಕುರುಕ್ಷೇತ್ರ ನೂರು ಕೋಟಿ ಕ್ಲಬ್ ಸೇರಿ ದಾಖಲೆ ಬರೆದಿದೆ. ಬಿಡುಗಡೆಯಾದಾಗಿನಿಂದ ಒಂದಲ್ಲಾ ಒಂದು ಸಮಸ್ಯೆಗಳು, ಮಳೆ-ನೆರೆ ಎಂದು ಜನ ತತ್ತರಿಸಿದರೂ ಸಿನಿಮಾವನ್ನ ಗೆಲ್ಲಿಸಿರುವುದನ್ನ ನೋಡಿದರೆ ದರ್ಶನ್ ಅಭಿಮಾನಿಗಳು ಎಂಥಹ ಸಂದರ್ಭದಲ್ಲೂ ಕೈ ಬಿಡುವುದಿಲ್ಲ ಎಂಬುದು ಗೊತ್ತಾಗುತ್ತೆ.
ನೂರು ಕೋಟಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ 100 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹೌದು, ಬಹುತಾರಾಗಣದ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ರಿಲೀಸ್ ಆಗಿ ಸಕ್ಸಸ್ ಆಗಿರೋ ಕುರುಕ್ಷೇತ್ರ 100 ಕೋಟಿ ರೂ. ದಾಖಲೆ ಗಳಿಕೆ ಮಾಡಿದೆ. ಈ ಮೂಲಕ ಕೆಜಿಎಫ್ ನಂತರ 100 ಕೋಟಿ ಕ್ಲಬ್ ಸೇರಿದ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೊದಲ ಸಿನಿಮಾ 100 ಕೋಟಿ ಗಳಿಸಿರೋದು . ಈ ಹಿಂದೆ ಬಿಡುಗಡೆಯಾಗಿದ್ದ ಯಜಮಾನ ಕೂಡ ಬಾಕ್ಸಾಫಿಸ್ನಲ್ಲಿ
ಧೂಳೆಬ್ಬಿಸಿತ್ತು ಆದರೆ 100 ಕೋಟಿ ಗಳಿಕೆ ಮಾಡಲು ವಿಫಲವಾಗಿತ್ತು. ಕುರುಕ್ಷೇತ್ರ
ನೂರು ಕೋಟಿ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಮುಂಬರುವ ದರ್ಶನ್ ಸಿನಿಮಾಗಳಾದ ರಾಬರ್ಟ್ ಹಾಗೂ ಮದಕರಿ ನಾಯಕ ಕೂಡ 200 ಕೋಟಿ ಗಳಿಸೋದು
ಪಕ್ಕಾ ಅಂತಿದ್ದಾರೆ ದರ್ಶನ್ ಅಭಿಮಾನಿಗಳು. ಹಾಗೂ ಟ್ವೀಟ್ ಮಾಡಿ
ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಪಡ್ತಿದ್ದಾರೆ. ಆದ್ರೆ, ಈವರೆಗೆ ಕುರುಕ್ಷೇತ್ರ ಸಿನಿಮಾ ಗಳಿಸಿರೋ ಒಟ್ಟು ಕಲೆಕ್ಷನ್ ಎಷ್ಟು
ಅನ್ನೋದನ್ನ ನಿರ್ಮಾಪಕರು ಬಹಿರಂಗ ಪಡಿಸಿಲ್ಲ. ಕನ್ನಡ ಸೇರಿದಂತೆ ತೆಲುಗು,
ತಮಿಳು, ಮಲಯಾಳಂ, ಹಿಂದಿಯಲ್ಲಿ ರಿಲೀಸ್ ಆಗಿದ್ದ ಕುರುಕ್ಷೇತ್ರದ ನಿಜವಾದ
ಕಲೆಕ್ಷನ್ ಎಷ್ಟು ಅನ್ನೋದು ಚಿತ್ರತಂದ ಬಹಿರಂಗಪಡಿಸಬೇಕಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಅಶ್ವಿನಿ ಪುನೀತ್ ಕುರಿತ ಪೋಸ್ಟ್ ನೋಡಿ ಬೇಸರಗೊಂಡ ದರ್ಶನ್
Kaatera Aradhana | ಕಾಟೇರಾ ಬೆಡಗಿ ಆರಾಧನಾ ರಾಮ್ ಹಾಟ್ ಫೋಟೋಶೂಟ್
ಶ್ರೀರಂಗ ಪಟ್ಟಣದಲ್ಲಿ ದರ್ಶನ್ ವಿವಾದಾತ್ಮಕ ಹೇಳಿಕೆ ಆರೋಪ