ನವದೆಹಲಿ: ಆಟೋಮೊಬೈಲ್ ಬಿಡಿ ವಸ್ತುಗಳ ತಯಾರಿಕ ಘಟಕಗಳಲ್ಲಿ ತೀವ್ರ ಆರ್ಥಿಕ ಹಿಂಜರಿಕೆ ಉಂಟಾದ ಹಿನ್ನೆಲೆ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿರುವಾಗಲೇ ಹಲವು ಸಂಸ್ಥೆಗಳೂ ಸಹ ವರ್ಕ್ಫೋರ್ಸ್ ಕಡಿಮೆಗೊಳಿಸುವ ನಿಟ್ಟಿನಲ್ಲಿ ಚಿಂತಿಸಿವೆ. ಇದಕ್ಕೆ ಪೂರಕ ಎಂಬಂತೆ ಅಸಂಬಂಧ ಕಾರಣ ನೀಡಿ ಜೋಮಾಟೋ ಸಂಸ್ಥೆ ಕೂಡ ತನ್ನ ಒಟ್ಟು ಕೆಲಸಗಾರರ ಸಾಮರ್ಥ್ಯದ ಹತ್ತರಷ್ಟು ಉದ್ಯೋಗಿಗಳಿಗೆ ಎರಡು ತಿಂಗಳ ಹೆಚ್ಚುವರಿ ವೇತನ ನೀಡಿ ವಜಾ ಗೊಳಿಸಿದೆ.
ಆಹಾರ ವಿತರಣಾ ಸಂಸ್ಥೆ ದೈತ್ಯವಾಗಿ ಬೆಳೆದಿದ್ದರೂ ಇತ್ತೀಚೆಗೆ ಸ್ವಿಗ್ಗಿ ಎಂಬ ಸಂಸ್ಥೆಯಿಂದ ತೀವ್ರವಾಗಿ ಪೈಪೋಟಿ ಎದುರಿಸುತ್ತಿದೆ. ಈ ಕುರಿತು ಸಮರ್ಥನೆ ಮಾಡಿಕೊಂಡಿರುವ ಸಂಸ್ಥೆ ಕೃತಕ ಬುದ್ಧಿಮತ್ತೆ ಹಾಗೂ ಸ್ವಯಂಚಾಲಿತ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಉದ್ಯೋಗ ಕಡಿತಕ್ಕೆ ಮುಂದಾಗಿರುವುದಾಗಿ ತಿಳಿಸಿದೆ. ಇದು ನೋವಿನ ನಿರ್ಧಾರವಾಗಿದ್ದರೂ, ಉದ್ಯೋಗಿಗಳಿಗೆ ಎರಡು ತಿಂಗಳ ವೇತನ ಹಾಗೂ ಕುಟುಂಬ ಆರೋಗ್ಯ ವಿಮಾ ರಕ್ಷಣೆಯನ್ನ ಮುಂದಿನ ವರ್ಷದ ಅಂತ್ಯದವರೆಗೆ ವಿಸ್ತರಿಸಿದ್ದೇವೆ ಎಂದು ಕಂಪನಿ ಹೇಳಿದೆ.
ಗೆದ್ದ ಅನರ್ಹರು..! ಗೆದ್ದು ಸೋತ ಸ್ಪೀಕರ್ : ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಏನಿದೆ..?
ನಮ್ಮನ್ನು ಮಾತುಗಳಲ್ಲೇ ರೇಪ್ ಮಾಡಿದ್ರು.. ರೆಸ್ಟೋರೆಂಟ್ನಲ್ಲಿ ಮೂವರು ಮಹಿಳೆಯರಿಂದ ದೂರು..!
ಡಿಕೆಶಿಗೆ ಜಾಮೀನು ಬೇಡ: ಜಾರಿ ನಿರ್ದೇಶನಾಲಯದಿಂದ ಆಕ್ಷೇಪಣೆ: ಏನಾಗುತ್ತೆ..?
ತಿಹಾರ್ ಜೈಲ್ನಲ್ಲಿ ಸಾಮಾನ್ಯನಂತೆ ಪಿ.ಚಿದಂಬರಂ, ವಿಶೇಷ ಸೌಲಭ್ಯ ಇಲ್ಲ
ಮುಂದಿನ 10 ದಿನ ಡಿಕೆಶಿ ವಿಚಾರಣೆ ಹೇಗಿರುತ್ತೆ..? ED ರೂಲ್ಸ್ ಏನೇನು..? – EXCLUSIVE
ಸೆ.13ರವರೆಗೆ ಡಿಕೆಶಿ ಇಡಿ ವಶಕ್ಕೆ: ಎಲ್ಲರದ್ದೂ ಒಂದೇ ʻರಾಗಾʼ ರಾಜಕೀಯ ವೈಷಮ್ಯ