Featured
8 ಸ್ಟಾರ್ ಹೀರೋಗಳು, 6 ಸ್ಟಾರ್ ಹೀರೋಯಿನ್ಸ್, ಒಂದೇ ಸಿನಿಮಾ : ಅಚ್ಚರಿಯಾದ್ರೂ ನಂಬಬೇಕು
![](https://risingkannada.com/wp-content/uploads/2019/08/fil.jpg)
ಚೆನ್ನೈ : ಇಬ್ಬರು ಸ್ಟಾರ್ ಹೀರೋಗಳು, ಇಬ್ಬರು ಸ್ಟಾರ್ ಹೀರೋಯಿನ್ಗಳನ್ನ ಒಂದೇ ಸಿನಿಮಾದಲ್ಲಿ ನೋಡೋದು ಕಾಮನ್. ಬಹಳಷ್ಟು ವರ್ಷಗಳಿಂದ ಈ ರೀತಿಯ ಮಲ್ಟಿಸ್ಟಾರರ್ ಮೂವಿ ಮಾಡೋದು ಚಾಲ್ತಿಯಲ್ಲಿದೆ. ಆದ್ರೀಗ ನಾವ್ ಹೇಳ್ತಿರೋ ಸುದ್ದಿ, ಸಿಕ್ಕಾಪಟ್ಟೆ ಸ್ಪೆಷಲ್. ಈ ಸಿನಿಮಾದಲ್ಲಿ 8 ಮಂದಿ ಸ್ಟಾರ್ ಹೀರೋಗಳಿದ್ದಾರೆ. ಜೊತೆಗೆ 6 ಸ್ಟಾರ್ ಹೀರೋಯಿನ್ಗಳೂ ಇದ್ದಾರೆ. ಇವರೆಲ್ಲಾ ನಟಿಸ್ತಿರೋದು ಒಂದೇ ಒಂದು ಸಿನಿಮಾದಲ್ಲಿ ಅನ್ನೋದೇ ವಿಶೇಷ. ಇಷ್ಟೆಲ್ಲಾ ಸ್ಟಾರ್ ಹೀರೋ, ಹಿರೋಯಿನ್ಗಳನ್ನ ಒಂದೇ ಸಿನಿಮಾದಲ್ಲಿ ಕಾಣಿಸುವಂತೆ ಮಾಡ್ತಿರೋ ಡೈರೆಕ್ಟರ್ ಮತ್ಯಾರೂ ಅಲ್ಲ. ಅವರೇ ಮನಿರತ್ನಂ.
ಯೆಸ್, ನಾವ್ ಹೇಳ್ತಿರೋದು ಸತ್ಯ. ಭಾರತೀಯ ಚಿತ್ರರಂಗದ ಗ್ರೇಟ್ ಡೈರೆಕ್ಟರ್ಗಳಲ್ಲಿ ಒಬ್ಬರಾಗಿರೋ ಮನಿರತ್ನಂ ಹೊಸತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಮನಿರತ್ನಂ ನಿರ್ದೇಶನದ ಮುಂದಿನ ಸಿನಿಮಾ ಹೆಸರು ಪೊನ್ನಿಯಿನ್ ಸೆಲ್ವನ್. ಇದು ಚೋಳ ಸಾಮ್ರಾಜ್ಯದ ಕಥೆ. ಒಂದೇ ಚೋಳ ರಾಜನ ಕಥೆಯನ್ನೇ ಮನಿರತ್ನಂ ಸಿನಿಮಾ ಮಾಡ್ತಿದ್ದಾರೆ. ಕಲ್ಕಿ ಕೃಷ್ಣಮೂರ್ತಿಯವರ ಐತಿಹಾಸಿಕ ಕಾದಂಬರಿ ಆಧರಿಸಿ, ಪೊನ್ನಿಯಿನ್ ಸೆಲ್ವನ್ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾಕ್ಕಾಗಿ ಬರೋಬ್ಬರಿ 8 ಹೀರೋಗಳು, 6 ಹೀರೋಯಿನ್ಗಳನ್ನ ಒಂದೇ ಚಿತ್ರಕ್ಕಾಗಿ ನಟಿಸುವಂತೆ ಮಾಡಿದ್ದಾರೆ. ಅದು ಸಣ್ಣಪುಟ್ಟ ಹೀರೋ-ಹೀರೋಯಿನ್ಗಳನ್ನ ಅಲ್ಲ. ಎಲ್ಲರೂ ಸ್ಟಾರ್ಗಳು ಅನ್ನೋದೇ ವಿಶೇಷ.
ಮಲ್ಟಿಸ್ಟಾರರ್ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ..?
ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ, ಶರತ್ ಕುಮಾರ್, ಸತ್ಯರಾಜ್, ಆರ್.ಪಾರ್ತಿಬನ್, ಅಥರ್ವ ಮುರಳಿ, ನಾಸಿರ್ ಸೇರಿ ದೊಡ್ಡ ದೊಡ್ಡ ನಟರು ಒಪ್ಪಿಗೆ ಸೂಚಿಸಿದ್ದಾರೆ. ಇವರ ಜೊತೆಗೆ ಐಶ್ವರ್ಯ ರೈ, ನಯನತಾರ, ಅನುಷ್ಕಾ ಶೆಟ್ಟಿ, ಕೀರ್ತಿ ಸುರೇಶ್, ಅಮಲಾ ಪೌಲ್, ರಾಶಿ ಖನ್ನಾ ಸೇರಿದಂತೆ ಹಲವು ಸ್ಟಾರ್ ನಟಿಯರೂ ಸೈ ಎಂದಿದ್ದಾರೆ.
ವಿಶೇಷ ರೀತಿಯ ಸಿನಿಮಾಗಳಿಗೆ ಮನಿರತ್ನಂ ಫೇಮಸ್. ಗುರು, ಯುವ, ಬಾಂಬೆ, ದಿಲ್ ಸೇ, ರಾವಣ್ ಸೇರಿದಂತೆ ಹಲವು ಸಿನಿಮಾಗಳ ಸೃಷ್ಟಿಕರ್ತ ಮನಿರತ್ನಂ. ಈಗ ಹೊಸ ಸಾಹಸಕ್ಕೆ ಕೈಹಾಕಿದ್ದು, ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಈ ಸಿನಿಮಾ ತಯಾರಾಗ್ತಿದೆ. ಬಜೆಟ್ ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಒಟ್ಟಿನಲ್ಲಿ ಭಾರತೀಯ ಚಿತ್ರರಂಗವೇ ಸೌತ್ ಇಂಡಸ್ಟ್ರಿಯತ್ತ ತಿರುಗಿ ನೋಡುವಂತಹ ಸಿನಿಮಾಗೆ ಕೈಹಾಕಿರೋ ಮನಿರತ್ನಂಗೆ ಶುಭವಾಗಲಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?