Featured
ಅಲರ್ಜಿಗೆ ಕಾರಣ ಏನು ..? ಕಂಡುಕೊಳ್ಳುವುದು ಹೇಗೆ …?
![](https://risingkannada.com/wp-content/uploads/2020/02/infection.jpg)
ರೈಸಿಂಗ್ ಕನ್ನಡ :- ಸಾಮನ್ಯವಾಗಿ ಬಾಲ್ಯದಲ್ಲಿ ಅಲರ್ಜಿ ಕಂಡುಬರುತ್ತದೆ. ಕೆಲವೊಮ್ಮೆ ಆರಂಭದಲ್ಲಿ ಕಾಣಿಸಿಕೊಂಡು ಪ್ರೌಢ ಹಂತದಲ್ಲಿ ಕಂಡುಬರುವುದಿಲ್ಲ. ಆದ್ಯಾಗೂ ಅಲರ್ಜಿ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ.
ಬಾಯಲ್ಲಿ ಏನಾದರೂ ಇಟ್ಟರೆ ಜುಮ್ಮೆನಿಸುವಿಕೆ ಅಥವಾ ಮುಖದಲ್ಲಿ ಗುಳ್ಲೆ ಕಾಣಿಸಿಕೊಂಡರೆ , ಆಹಾರದಿಂದ ಅಲರ್ಜಿ ಎನ್ನಲಾಗಿದೆ. ಇದು ಯಾವುದಾದರೊಂದು ನಿರ್ದಿಷ್ಟ ಆಹಾರ ಸೇವನೆ ನಂತರ ಅಹಿತಕರ ರೋಗನಿರೋಧಕ ವ್ಯವಸ್ಥೆಯ ಪ್ರತಿಕ್ರಿಯೆಯಾಗಿದೆ.
ಸಾಮನ್ಯವಾಗಿ ಬಾಲ್ಯದಲ್ಲಿ ಅಲರ್ಜಿ ಕಂಡುಬರುತ್ತದೆ. ಕೆಲವೊಮ್ಮೆ ಆರಂಭದಲ್ಲಿ ಕಾಣಿಸಿಕೊಂಡು ಫ್ರೌಢ ಹಂತದಲ್ಲಿ ಕಂಡುಬರುವುದಿಲ್ಲ. ಆದಯಾಗೂ ಅಲರ್ಜಿ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ.
ಅಲರ್ಜಿ ಕಂಡುಕೊಳ್ಳುವುದು ಹೇಗೆ ?
- ಆಹಾರದ ಅಲರ್ಜಿಯ ಅನುಮಾನಗಳಿದ್ದರೆ ಡಾಕ್ಟರ್ ಜೊತೆಗೆ ಮುಕ್ತವಾಗಿ ಮಾತನಾಡಬೇಕು.
- ಚರ್ಮದ ಮೇಲಿನ ಗುಳ್ಳೆಗೆ ಸಂಬಂಧಿಸಿದ ಪರೀಕ್ಷೆಯನ್ನು ಪ್ರಯೋಗಾಲಯಿಂದ ಧೃಢಪಡಿಸಿಕೊಳ್ಳಬೇಕು.
- ಆಹಾರದ ಅಲರ್ಜಿಗಳಲ್ಲಿ ಬೇರೆ ಬೇರೆ ವಿಧಗಳಿವೆ.
- ಸಿದ್ಧವಾದ ಆಹಾರವನ್ನು ಖರೀದಿಸಿದಾಗ ಆಹಾರದ ಪೊಟ್ಟಣಗಳ ಮೇಲಿನ ಬಿಲ್ಲೆಗಳನ್ನು ಓದಬೇಕು.
- ಗುಣಪಡಿಸಬಹುದಾದಂತಹ ಅಲರ್ಜಿಗಳನ್ನು ಮಾತ್ರ ತಡೆಗಟ್ಟಬಹುದು.
ಸಮುದ್ರದ ಆಹಾರದಿಂದ ಬರುವ ಅಲರ್ಜಿ
ಮೀನಿನಂತಹ ಸಮುದ್ರ ಆಹಾರ ಸೇವನೆಯಿಂದ ಅಲರ್ಜಿ ಬರುತ್ತದೆ. ವಯಸ್ಕರಲ್ಲಿ ಇದು ಸಾಮನ್ಯ . ಬಾಯಲ್ಲಿ ಹುಣ್ಣು, ಹೊಟ್ಟೆನೋವು , ಮತ್ತಿತರ ಬಾದೆಗಳು ಕಾಣಿಸಿಕೊಳ್ಳಬಹುದು.
ಗೋಧಿಯಿಂದ ಬರುವ ಅಲರ್ಜಿ
ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಉಂಟಾಗುತ್ತವೆ. ಗೋಧಿಯಿಂದ ತಯಾರಿಸಿದ ಆಹಾರ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು.
ಮೊಟ್ಟೆ ಸೇವನೆಯಿಂದಾಗುವ ಅಲರ್ಜಿ
ಈ ರೀತಿಯ ಅಲರ್ಜಿ ಒಂದು ವರ್ಷ ನಂತರದ ಮಕ್ಕಳಲ್ಲಿ ಕಂಡುಬರುತ್ತದೆ. ಮೊಟ್ಟೆಗಳು ಹೆಚ್ಚಾಗಿ ಮಕ್ಕಳಲ್ಲಿ ಅಲರ್ಜಿ ಉಂಟುಮಾಡುತ್ತವೆ. ಇದರಿಂದಾಗಿ ರ್ಜರ್ಣಕ್ರಿಯೆ ಹಾಗೂ ಚರ್ಮದ ತೊಂದರೆಗಳು ಕಂಡುಬರುತ್ತವೆ.
ಹಾಲಿನಿಂದಾಗುವ ಅಲರ್ಜಿ
ಬಾಲ್ಯವಸ್ಥೆಯಲ್ಲಿ ಮೊದಲ ಮೂರು ವರ್ಷದ ಮಕ್ಕಳಲ್ಲಿ ಹಾಲು ಸೇವನೆಯಿಂದಲೂ ಅಲರ್ಜಿ ಬರುತ್ತದೆ. ಇಂತಹ ಅಲರ್ಜಿಗಳನ್ನು ಗುರುತಿಸಿ ನಿಗಾ ವಹಿಸಿದರೆ ಮಕ್ಕಳು ಉತ್ತಮ ರೀತಿಯಲ್ಲಿ ಬೆಳೆಯುತ್ತಾರೆ. ವಾಂತಿ, ಅತಿಸಾರ ಬೇದಿ, ಮತ್ತು ಮತ್ತಿತರ ಕಾಯಿಲೆಗಳು ಇದರ ಲಕ್ಷಣಗಳಾಗಿವೆ.
![](https://risingkannada.com/wp-content/uploads/2020/02/milk1.jpg)
ಕಡಲೇ ಕಾಯಿ ಸೇವನೆ
ಕಡಲೆಕಾಯಿಯಿಂದ ಬರುವ ಅಲರ್ಜಿ ಸಾಮನ್ಯ ಅಲರ್ಜಿಗಳಲ್ಲಿ ಒಂದಾಗಿದೆ. ಭಾರತಕ್ಕಿಂಂಲೂ ವಿದೇಶದಲ್ಲಿ ಇದು ಹೆಚ್ಚಾಗಿದೆ. ಈ ರೀತಿಯ ಅಲರ್ಜಿ ಅಪಾಯಕಾರಿಯಾಗಿದೆ. ಈ ಬೀಜಗಳನ್ನು ಹೊಂದಿರುವ ಆಹಾರ ಸೇವನೆಯನ್ನು ಕಡಿಮೆ ಮಾಡಬೇಕು. ಇದರಿಂದಾಗಿ ಅಸ್ತಮಾ, ಚರ್ಮದ ತೊಂದರೆಯಂತಹ ಕಾಯಿಲೆಗಳು ಬರಬಹುದು.
ಸೋಯಾ
ಈ ರೀತಿಯ ಅಲರ್ಜಿಯನ್ನು ಮಕ್ಕಳಲ್ಲಿ ಗುರುತಿಸಬಹುದು. ಹಣ್ಣುಗಳು ಮತ್ತು ತರಕಾರಿಗಳು ಸಹ ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ ಎಂಬ ಸಾಮನ್ಯ ತಪ್ಪು ಕಲ್ಪನೆ ಇದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?