Featured
ಇಂಗ್ಲೀಷ್ ಮಾಧ್ಯಮವೋ..? ಕನ್ನಡ ಮಾಧ್ಯಮವೋ..? : ಬಿಜೆಪಿ ಸರ್ಕಾರದ ನಿರ್ಧಾರವೇನು..? ಸಾಹಿತಿಗಳು ಹೇಳೋದೇನು..?
![](https://risingkannada.com/wp-content/uploads/2019/09/ಸಾಹಿತಿ.jpg)
ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ, ಸರ್ಕಾರಿ ಶಾಲೆಗಳಲ್ಲೂ ಪ್ರೀ-ಕೆಜಿಯಿಂದಲೇ ಇಂಗ್ಲೀಷ್ ಕಲಿಸೋ ನಿರ್ಧಾರ ಮಾಡಿದ್ರು. ಇದಕ್ಕಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆರೆಯೋದಾಗಿ ಹೇಳಿ, ಕೆಲವು ಕಡೆ ಚಾಲನೆ ಕೂಡ ನೀಡಿದ್ರು. ಆದ್ರೀಗ, ಕರ್ನಾಟಕ ಪಬ್ಲಿಕ್ ಸ್ಕೂಲ್ ಇರುತ್ವಾ..? ಮುಚ್ಚುತ್ವಾ..? ಅನ್ನೋ ಗೊಂದಲ ಶುರುವಾಗಿದೆ.
ಹೌದು, ಕುಮಾರಸ್ವಾಮಿ ಇಂಗ್ಲೀಷ್ ಮಾಧ್ಯಮ ಸ್ಕೂಲ್ ಆದೇಶ ಹೊರಡಿಸಿದಾಗ, ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧಿಸಿದ್ರು. ಕನ್ನಡ ಸಾಹಿತಿಗಳು, ಚಿಂತಕರು ವಿರೋಧ ವ್ಯಕ್ತಪಡಿಸಿದ್ರು. ಇದೀಗ ಕನ್ನಡ ಸಾಹಿತಿಗಳು, ಚಿಂತಕರು ಸಿಎಂ ಯಡಿಯೂರಪ್ಪ ಅವರನ್ನ ಭೇಟಿಯಾಗಿ, ಪ್ರಾಥಮಿಕ ಶಾಲೆ ಕನ್ನಡ ಮಾಧ್ಯಮದಲ್ಲೇ ಇರಲಿ ಎಂದು ಮನವಿ ಸಲ್ಲಿಸಿದ್ದಾರೆ. ಚಿಂತಕರ, ಸಾಹಿತಿಗಳ ಮನವಿ ಸ್ವೀಕರಿಸಿರೋ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಮುಂದಿನ ನಿರ್ಧಾರ ಏನು ಅನ್ನೋದೇ ಗೊಂದಲ ಮೂಡಿಸಿದೆ.
ಸಾಹಿತಿಗಳು, ಚಿಂತರಕರು ಹೇಳೋದೇನು..?
ಸಾಹಿತಿ ಚಿದಾನಂದ ಮೂರ್ತಿ : ಒಂದರಿಂದ 7ನೇ ತರಗತಿವರೆಗೆ ಕನ್ನಡವೇ ಮಾಧ್ಯಮವಾಗಬೇಕು. ಮಾತೃಭಾಷೆಯಲ್ಲೇ ಕಲಿಕೆ ಸೂಕ್ತ. ವಿದ್ಯಾರ್ಥಿಗಳ ಭಾಷಾ ಜ್ಞಾನ ಹಾಗೂ ರಾಷ್ಟ್ರ ಜ್ಞಾನ ಹೆಚ್ಚಲು ಮಾತೃಭಾಷಾ ಶಿಕ್ಷಣ ಅಗತ್ಯ.
ಸಾಹಿತಿ ಗೋ.ರು. ಚನ್ನಬಸಪ್ಪ : ಮಕ್ಕಳ ಮಾಧ್ಯಮ ಕುರಿತು ಚದುರಂಗ ಆಟ ಆಡಬೇಡಿ. ಸರ್ಕಾರಿ ಶಾಲೆಯಲ್ಲಿ ಬಡಮಕ್ಕಳೇ ಕಲಿಯುತ್ತಾರೆ. ಖಾಸಗೀ ಶಾಲೆಗಳ ದಬ್ಬಾಳಿಕೆ ನಿಲ್ಲಬೇಕು. ನಮ್ಮ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಸಾಹಿತಿ, ಹೋರಾಟಗಾರ ಡಾ.ದೊಡ್ಡರಂಗೇಗೌಡ : ಕನ್ನಡ ನಾಡಿನಲ್ಲಿ ಮಕ್ಕಳು ಕನ್ನಡ ಕಲಿಯುವಂತಾಗಬೇಕು. ಕನ್ನಡ ಇಂದು ವಿಶ್ವ ದರ್ಜೆಯನ್ನ ಪಡೆದಿದೆ. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೂ ಉನ್ನತ ಹುದ್ದೆಗಳು ಲಭಿಸುತ್ತಿವೆ.
ಸಾಹಿತಿಗಳ, ಚಿಂತಕರ ಮನವಿ ಸ್ವೀಕರಿಸಿರೋ ಸಿಎಂ ಯಡಿಯೂರಪ್ಪ, ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚೆ ನಡೆಸಿ, ತೀರ್ಮಾನಕ್ಕೆ ಬರೋದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಸರ್ಕಾರಗಳು ಬದಲಾಗುತ್ತಿದ್ದಂತೆ ನಿರ್ಧಾರಗಳು, ತೀರ್ಮಾನಗಳು ಬದಲಾಗುತ್ವೆ. ಇದರಿಂದ ಮಕ್ಕಳು ಪರದಾಡುವಂತಾಗ್ತಿರೋದು ವಿಪರ್ಯಾಸವೇ ಸರಿ.
ಈ ವಿಚಾರದಲ್ಲಿ ನಿಮ್ಮ ನಿಲುವೇನು..? ಕಾಮೆಂಟ್ ಮಾಡಿ, ಅಭಿಪ್ರಾಯ ತಿಳಿಸಿ, ಸಲಹೆ ಕೊಡಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?