Featured
ಫ್ಯಾಂಟಮ್ ಚಿತ್ರಕ್ಕೆ ನಿರೂಪ್ ಎಂಟ್ರಿ – ಸಖತ್ ವೈರಲ್ ಆಗ್ತಿದೆ ಹೊಸ ಪೋಸ್ಟರ್!
![](https://risingkannada.com/wp-content/uploads/2020/08/Untitled.jpg)
ರೈಸಿಂಗ್ ಕನ್ನಡ :
ಬೆಂಗಳೂರು :
ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರ ತನ್ನ ಹೊಸ ಹೊಸ ಅಪ್ಡೇಟ್‌ಗಳಿಂದಲೇ ಕುತೂಹಲವನ್ನ ಹೆಚ್ಚಿಸುತ್ತಿದೆ. ಈ ಚಿತ್ರತಂಡ ಈಗ ನಟ ನಿರೂಪ್ ಭಂಡಾರಿ ಅವರ ಹುಟ್ಟುಹಬ್ಬಕ್ಕಾಗಿ ಒಂದು ಸರ್ಪ್ರೈಸ್ ಉಡುಗೊರೆ ನೀಡಿದೆ.
ಫ್ಯಾಂಟಮ್ ಸಿನಿಮಾದಲ್ಲಿ ನಿರೂಪ್ ಭಂಡಾರಿ ಅಭಿನಯದ ಫಸ್ಟ್ ಲುಕ್ ಅನ್ನ ಚಿತ್ರತಂಡ ಬಿಡುಗಡೆ ಮಾಡಿದೆ. ಸಂಜೀವ್ ಗಾಂಭೀರ ಅಲಿಯಾಸ್ ಸಂಜು. ಲಂಡನ್ನಿಂದ ಹುಟ್ಟೂರಿಗೆ ಹಿಂತಿರುಗುವ ಸಂಜು ಪಾತ್ರದಲ್ಲಿ ನಿರೂಪ್ ಕಾಣಿಸಿಕೊಳ್ಳಲಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಈ ಪೋಸ್ಟರ್ ಅನ್ನ ಉಡುಗೊರೆಯಾಗಿ ಚಿತ್ರತಂಡ ನೀಡಿದೆ.
![](https://risingkannada.com/wp-content/uploads/2020/08/WhatsApp-Image-2020-08-13-at-11.16.10-AM-819x1024.jpeg)
ಇನ್ನು ನಿರೂಪ್ ಭಂಡಾರಿ ಅವರು ಈ ಸಿನಿಮಾಗೆ ಎಂಟ್ರಿ ಕೊಟ್ಟಿರೋದನ್ನ ಚಿತ್ರತಂಡ ಅಧಿಕೃತಗೊಳಿಸಿದೆ. ಸಂಜು ಪಾತ್ರದ ಪರಿಚಯ ಮಾಡಿಕೊಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ಇನ್ನು ಫಕೀರ ಅಂದರೆ ಏನು ಎನ್ನುವುದಕ್ಕೆ ಎಲ್ಲೂ ನೇರವಾಗಿ ಉತ್ತರ ಕೊಟ್ಟಿಲ್ಲ.
ಲಂಡನ್ನಿಂದ ಹುಟ್ಟೂರಿಗೆ ಬರುವ ಸಂಜು, ನಗುತ್ತಾ, ಎಲ್ಲರನ್ನೂ ನಗಿಸುತ್ತಾ ಇರುವ ಜಾಲಿ ಬಾಯ್ ಪಾತ್ರ. ಈತನನ್ನು ಸಿನಿಮಾದಲ್ಲಿ ಪರಿಚಯಿಸುವ ಹಾಡು ಫಕೀರ ಇರಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಅಣ್ಣನ ಚಿತ್ರದಲ್ಲಿ ತಮ್ಮ ಇರದಿದ್ದರೇ ಹೇಗೆ ಅನ್ನೋ ಪ್ರಶ್ನೆ ಈ ಮೊದಲು ಕೂಡ ಅಭಿಮಾನಿಗಳನ್ನ ಕಾಡುತ್ತಿತ್ತು. ಆ ಪ್ರಶ್ನೆಗೆ ಈಗ ಉತ್ತರಸಿಕ್ಕಿದಂತಾಗಿದೆ.
![Puradamma](https://risingkannada.com/wp-content/uploads/2020/08/Puradamma.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?